ವಿದ್ಯಾರ್ಥಿಗಳೇ ಮತ್ತು ಓದುಗರೆ ರಾಜ್ಯಾದ್ಯಂತ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ಅಭ್ಯಾಸ ಮಾಡುತ್ತಿರುವಂತಹ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 2025 ಮತ್ತು 2026 ನೇ ಸಾಲಿನಲ್ಲಿ ವಿದ್ಯಾಸಿರಿ ವಿದ್ಯಾರ್ಥಿ ವೇತನ ಅರ್ಜಿ ಅಹ್ವಾನ ಮಾಡಲಾಗಿದೆ. ವಿದ್ಯಾಸಿರಿ ವಿದ್ಯಾರ್ಥಿವೇತನ 2025
ವಿದ್ಯಾಸಿರಿ ವಿದ್ಯಾರ್ಥಿವೇತನ ಇಂತವರಿಗೆ ವಾರ್ಷಿಕ 15,000 ಸಾವಿರ ನೆರವು.

ವಿದ್ಯಾಸಿರಿ ವಿದ್ಯಾರ್ಥಿ ವೇತನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡುವಂತ ಒಂದು ಮಹತ್ವಪೂರ್ಣ ಯೋಜನೆಯಾಗಿದೆ. ಇದರಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ತಿಂಗಳಿಗೆ 1,500ನಂತೆ 10 ತಿಂಗಳು ಒಟ್ಟು ವಾರ್ಷಿಕವಾಗಿ 15000 ರೂಪಾಯಿಗಳನ್ನು ವಿದ್ಯಾರ್ಥಿಗಳ ನೇರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ , ಇಲ್ಲಿದೆ ಮಾಹಿತಿ. Free sewing machine scheme
ಅರ್ಜಿ ಸಲ್ಲಿಸಲು ಅರ್ಹತೆ.
- ವಿದ್ಯಾರ್ಥಿಗಳು ನಮ್ಮ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು.
- ವಿದ್ಯಾರ್ಥಿಗಳ ವಾರ್ಷಿಕ ವರಮಾನ ಅಥವಾ ಕುಟುಂಬದ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಪ್ರವರ್ಗ ಒಂದು ಅಲ್ಪಸಂಖ್ಯಾತ ( minority students ) ವಿದ್ಯಾರ್ಥಿಗಳು ಕುಟುಂಬದ ಆದಾಯ 2.50 ಲಕ್ಷದ ಒಳಗೆ ಇರತಕ್ಕದ್ದು.
- ವಿದ್ಯಾರ್ಥಿಗಳು ಹಳ್ಳಿ ಅಥವಾ ಗ್ರಾಮೀಣ ಪ್ರದೇಶದಿಂದ ಬಂದಿರಬೇಕು ಹಾಗೂ ಕಾಲೇಜು ಮತ್ತು ಅವರ ಮನೆಯ ನಡುವಿನ ದೂರ 5 km ಗಿಂತ ಹೆಚ್ಚಿಗೆ ಇರಬೇಕು.
- ವಿದ್ಯಾರ್ಥಿಗಳು ಹಾಸ್ಟೆಲ್ ಪಿ ಜಿ ಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಹೊಂದಿದ್ದರೆ ಅವರಿಗೂ ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರು.
• ಈ ಯೋಜನೆ ಅಥವಾ ವಿದ್ಯಾರ್ಥಿ ವೇತನವನ್ನು ಹಿಂದುಳಿದ ವರ್ಗಗಳಿಗೆ ಆರ್ಥಿಕ ಬೆಂಬಲ ನೀಡುತ್ತದೆ. ಅರ್ಹತೆ ಉಳ್ಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅನುಕೂಲ ಮಾಡಿಕೊಡುತ್ತದೆ. ಮೆಟ್ರಿಕ್ ನಂತರದ ಕೋರ್ಸ್ಗಳನ್ನು ಓದಲು ವಿದ್ಯಾರ್ಥಿಗಳ ಮೇಲಿನ ಆರ್ಥಿಕ ತೊಂದರೆಯನ್ನು ಸುಗಮ ಪಡಿಸುತ್ತದೆ.
ಅಗತ್ಯ ದಾಖಲೆಗಳು .
ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ವಿದ್ಯಾರ್ಥಿಗಳ ಆಧಾರ್ ಕಾರ್ಡ್. ಪೋಷಕರು ಅಥವಾ ಪಾಲಕರ ಆಧಾರ್ ಕಾರ್ಡ್. ಈ ಹಿಂದೆ ಕಲಿತ ವರ್ಷದ ಮಾರ್ಕ್ಸ್ ಕಾರ್ಡ್. ವಿದ್ಯಾರ್ಥಿಗಳ ಶಾಲಾ ಐಡಿ ಕಾರ್ಡ್.
ವಿದ್ಯಾರ್ಥಿಗಳು ಎಲ್ಲಿ ಅರ್ಜಿ ಹಾಕೋದು?
ಆಸಕ್ತ ವಿದ್ಯಾರ್ಥಿಗಳು ಲೇಖನದ ಕೊನೆಯಲ್ಲಿ ನೀಡಿರುವ ಲಿಂಕನ್ನು ಗೂಗಲ್ನಲ್ಲಿ ಸರ್ಚ್ ಮಾಡಿ, ಅರ್ಜಿ ಹಾಕುವ ಹಂತಗಳನ್ನು ತಿಳಿದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ಜಾಲತಾಣ ಭೇಟಿ ಮಾಡಿ. https://ssp.postmatric.karnataka.gov.in
Source : vijayakarnataka.com

ನಾನು ಮಾಲತೇಶ bsc ಪದವಿಧರ, ನಾನು 3 ವರ್ಷಗಳಿಂದ ಕೃಷಿ, ಗ್ರಾಮೀಣ ಸಮಾಜದ ಸುದ್ದಿಗಳು, ಸರ್ಕಾರದ ಯೋಜನೆಗಳ ಬಗ್ಗೆ ನಿಖರ ಮತ್ತು ಸರಳ ಮಾಹಿತಿಯನ್ನು ಜನರಿಗೆ ನೀಡುವಲ್ಲಿ ಪರಿಣಿತಿ ಹೊಂದಿರುತ್ತೇನೆ.