ರಾಜ್ಯದಲ್ಲಿ ಜೂನ್ ಒಂದರಿಂದ ಈ ವರ್ಷದ ಮುಂಗಾರು ಮಳೆ ಪ್ರವೇಶವಾಗಿದ್ದು, ರೈತರು ಜೂನ್ ತಿಂಗಳ ಮೊದಲ ವಾರದಲ್ಲಿ ತಮ್ಮ ಹೊಲದಲ್ಲಿ ಬೀಜ ಬಿತ್ತನೆ ಮಾಡಿದ್ದಾರೆ. ಈ ಮುಂದಿನ 2 ತಿಂಗಳು ಮಳೆ ಕಡಿಮೆ ಬೀಳಲಿದೆ ಎಂದು ವರದಿ ( imd ) ಹೊರ ಬಿದ್ದಿದೆ.
ಆದರೆ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು ಕೃಷಿಕ ಬೆಳೆದಂತ ಪೈರು ಅಲ್ಲಲ್ಲಿ ನಾಶವಾಗಿದೆ.

ರಾಜ್ಯದಲ್ಲಿ ಮುಂದಿನ 2 ತಿಂಗಳು ಕೆಲ ಜಿಲ್ಲೆಗಳಿಗೆ ಮಳೆ ಕೊರತೆ,
ಇದನ್ನೂ ಓದಿ: Bele vime amount : ರೈತರ ಖಾತೆಗೆ 1449 ಕೋಟಿ ಬೆಳೆ ವಿಮೆ ಜಮಾ. ನಿಮ್ಮ ಖಾತೆಗೆ ಬಂತಾ check ಮಾಡಿ.
ಹಂಗೆ ರಾಜ್ಯದಲ್ಲಿ ಈಗಾಗಲೇ ಮುಂಗಾರು ಮಳೆ ಅರ್ಧ ಮುಕ್ತಾಯವಾಗಿದ್ದು, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಕುರಿತೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ( imd ) ಎಚ್ಚರಿಕೆಯನ್ನು ನೀಡಿದೆ.
ನಮ್ಮಲ್ಲಿ ಆಗಲೇ ಬಿತ್ತನೆ ಬೀಜ ಮಾಡಿ ಹತ್ತಿ ಗೋವಿನ ಜೋಳ ಅಥವಾ ಮೆಕ್ಕೆಜೋಳ ಸೋಯಾಬಿನ್ ಮುಂತಾದವು ಸೊಂಟದ ತನಕ ಅಥವಾ ಮೂರರಿಂದ ನಾಲ್ಕು ಅಡಿಗಳಷ್ಟು ಬೆಳೆದು ನಿಂತಿದೆ. ಹೂ ಕಾಯಿ ಮತ್ತು ತೆನೆ ಕೀಳುವ ಸಂದರ್ಭದಲ್ಲಿ ಮಳೆ ಅಭಾವ ಉಂಟಾದರೆ ಇಳುವರಿ ತೀರ ಕುಂಠಿತ ಆಗುತ್ತದೆ.
Bele sameekshe app : 2025-26ರ ಮುಂಗಾರು ಬೆಳೆ ಸಮೀಕ್ಷೆ ಮಾಡಲು App ಬಿಡುಗಡೆ, ಇಲ್ಲಿದೆ ಡೈರೆಕ್ಟ್ ಲಿಂಕ್.
ಕರಾವಳಿ ಜಿಲ್ಲೆಗಳಲ್ಲಿ ಈ ಸರಿ ಅತ್ಯುತ್ತಮ ಮಳೆ ಸುರಿದ ಪರಿಣಾಮ, ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿ ನೀರನ್ನು ಹೊರಗೆ ಬಿಡಲಾಗಿದೆ. ಮೆಕ್ಕೆಜೋಳ ರಾಗಿ ಸಜ್ಜೆ ಗೋದಿ ಭತ್ತ ಜೋಳ ತೊಗರಿ ಕಡಲೆ ಹುರುಳಿ ಉದ್ದು ಹಲಸಂದೆ ಅವರೆ ಶೇಂಗಾ ಎಳ್ಳು ಸೂರ್ಯಕಾಂತಿ ಹರಳು ಸಾಸಿವೆ ಅವರೇ ಅಗಸೆ ಕಬ್ಬು ತಂಬಾಕು ಬೆಳೆಗಳು, ಇವೆಲ್ಲ ಈಗ ತುಂಬಾ ಸೊಗಸಾಗಿ ಬೆಳೆದು ನಿಂತಿವೆ.
ಈ ಜಿಲ್ಲೆಗಳಿಗೆ ಮಳೆ ಕಡಿಮೆ.
ಈ ಎರಡು ತಿಂಗಳಲ್ಲಿ ದಕ್ಷಿಣ ಕನ್ನಡ ಉತ್ತರ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಮುಂದಿನ ಎರಡು ತಿಂಗಳು ಮಳೆಯ ಭಾವ ಉಂಟಾಗುವ ನಿರೀಕ್ಷೆ ಇದೆ ಎಂದು ವರದಿಂದ ತಿಳಿದುಬಂದಿದೆ. ಹಾಗೇನೆ ಕೊಡಗು ಚಿಕ್ಕಮಗಳೂರು ಶಿವಮೊಗ್ಗ ಹಾಸನದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಮಳೆಯ ಅಭಾವ ಹೆಚ್ಚು ಕಾಡಲಿದೆ ಎಂದು ತಿಳಿಸಿದ್ದಾರೆ.
ಈ ತಿಂಗಳಲ್ಲಿ ಚಿಕ್ಕಬಳ್ಳಾಪುರ ತುಮಕೂರು ಕೋಲಾರ ಮಂಡ್ಯ ರಾಮನಗರ ಮೈಸೂರು ಬೀದರ್ ಬೆಳಗಾವಿ ಧಾರವಾಡ ಗದಗ ಹಾವೇರಿ ಕಲಬುರ್ಗಿ ಕೊಪ್ಪಳ ರಾಯಚೂರು, ವಿಜಯಪುರ ಯಾದಗಿರಿ ಚಿತ್ರದುರ್ಗ ದಾವಣಗೆರೆಯಲ್ಲಿ ಮಳೆ ಕುಂಠಿತ ಆಗಲಿದೆ. ಆದರೆ ಸಪ್ಟಂಬರ್ ತಿಂಗಳಲ್ಲಿ ಸ್ವಲ್ಪ ಅಧಿಕವಾಗಿ ಮಳೆ ಆಗಲಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಮಳೆ ಮಾಹಿತಿ ಪಡೆಯಲು imd ಜಾಲತಾಣ visit ಮಾಡಿ: click here

ನಾನು ಮಾಲತೇಶ bsc ಪದವಿಧರ, ನಾನು 3 ವರ್ಷಗಳಿಂದ ಕೃಷಿ, ಗ್ರಾಮೀಣ ಸಮಾಜದ ಸುದ್ದಿಗಳು, ಸರ್ಕಾರದ ಯೋಜನೆಗಳ ಬಗ್ಗೆ ನಿಖರ ಮತ್ತು ಸರಳ ಮಾಹಿತಿಯನ್ನು ಜನರಿಗೆ ನೀಡುವಲ್ಲಿ ಪರಿಣಿತಿ ಹೊಂದಿರುತ್ತೇನೆ.