ರಾಜ್ಯಾದ್ಯಂತ ಗಣೇಶ ಮತ್ತು ಈದ್ ಮಿಲಾದ್ ಹಬ್ಬಕ್ಕೆ dj system ಬಳಕೆ ನಿಷೇಧ, ಸರ್ಕಾರ ಆದೇಶ.

Share This Post

ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿಯ ಪರವಾಗಿ ರಾಜ್ಯಾದ್ಯಂತ ಭಕ್ತರು ಡಿಜೆ ( dj system ) ಹಾಕಲು ಅಣಿ ಮಾಡಿಕೊಂಡಿದ್ದರು ಆದರೆ ರಾಜ್ಯ ಸರ್ಕಾರವು ಇದಕ್ಕೆ ಬ್ರೇಕ್ ಹಾಕಿದೆ ಮಾಹಿತಿ ಇಲ್ಲಿದೆ. 

ಆಗಸ್ಟ್ 27 ರಿಂದ ಸೆಪ್ಟೆಂಬರ್ 15 ವರೆಗೆ ನಿಷಿದ್ಧ.

ಈ ಬಾರಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಕ್ಕೆ ರಾಜ್ಯ ಸರ್ಕಾರವು ಭಕ್ತರಿಗೆ ಶಾಕ್ ನೀಡಿದ್ದು ಆಗಸ್ಟ್ 27 ರಿಂದ ಸಪ್ಟಂಬರ್ 15ನೇ ತಾರೀಖಿನ ತನಕ dj system ಅನ್ನು  ನಿಷೇಧ ಗೊಳಿಸಿದೆ. 

Ganesha chaturthi ban dj system by government
Ban dj system on ganesha chaturthi and eid milad

ಪ್ರತಿ ವರ್ಷದಂತೆ ಈ ವರ್ಷವೂ ಆಗಸ್ಟ್ 27ನೇ ತಾರೀಕು ಗಣೇಶ ಚತುರ್ಥಿರಲಿದ್ದು ರಾಜ್ಯದ್ಯಂತ ಮತ್ತು ರಾಷ್ಟ್ರದ ಹಲವು ರಾಜ್ಯಗಳಲ್ಲಿ ಹಬ್ಬವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಅತಿಹೆಚ್ಚಿನ ಶಬ್ದ ಮಾಡುವಂತಹ ಡಿಜೆಗಳನ್ನು ಬಳಸಲಾಗುತ್ತದೆ.

ಹೃದಯಾಘಾತ ರೋಗಿಗಳಿಗೆ, ಸಮಸ್ಯೆ ಉಂಟಾಗುತ್ತದೆ ಎಂದು ಪರಿಗಣನೆ.

ಇದರಿಂದ ಹೃದಯಾಘಾತ ಮತ್ತು ಹೃದಯ ವೈಫಲ್ಯ ಇರುವಂತಹ ರೋಗಿಗಳಿಗೆ ಹಾಗೂ ಜನರಿಗೆ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದು ಸರ್ಕಾರವು ಈ ಬಾರಿ ಇಂತಹ ಕಠಿಣ ಕ್ರಮವನ್ನು ಆದೇಶಿಸಿ, ರಾಜ್ಯದ ಆಯಾ ಜಿಲ್ಲಾಧಿಕಾರಿಗಳಿಗೆ ನಿಷೇಧ ಮಾಡಲು ಸೂಚನೆಯನ್ನು ನೀಡಿದೆ. 

Ration card amendment : ಪಡಿತರ ಚೀಟಿ ತಿದ್ದುಪಡಿ ಮಾಡಲು ಆಗಸ್ಟ್ 31 ವರೆಗೆ ಅವಕಾಶ,

ಗಣೇಶ ಹಬ್ಬ ಆಗಸ್ಟ್ 27 ರಂದು ಆಚರಣೆ.

ಗಣೇಶ ಹಬ್ಬದ ಪ್ರಯುಕ್ತವಾಗಿ ಈ ತಿಂಗಳು ಅಗಸ್ಟ್ 27ರಂದು ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಗುತ್ತದೆ.

ಗಣೇಶ ಕೂರಿಸುವ ಸಮಯದಲ್ಲಿ ಮತ್ತು ವಿಸರ್ಜನೆ ಮಾಡುವ ಸಂದರ್ಭದಲ್ಲಿ, ಭಕ್ತರು dj system ಬಳಸಿ , ಕರೆ ತರುವುದು ಮತ್ತು ವಿಸರ್ಜನೆ ಮಾಡುವುದು ಮಾಡಲಾಗುತ್ತದೆ. ಆದರೆ ಈ ಬಾರಿ ಇದ್ಯಾವುದಕ್ಕೂ ಸರಕಾರ ಅವಕಾಶ ನೀಡದೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ.

ಇಂದಿನಿಂದ Gas cylinder ಬೆಲೆ ಇಳಿಕೆ, 33.50 ರೂಪಾಯಿ ಕಡಿಮೆ ಮಾಡಲಾಗಿದೆ.

ಡಿಜೆ ಬಳಸಲು ಈ ಬಾರಿ ಅವಕಾಶ ಇಲ್ಲ.

ಪ್ರತಿವರ್ಷ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಡಿಜೆ ಬಳಸಲು ಅನುಮತಿ ಪಡೆಯಬೇಕಾಗಿತ್ತು. ಪೊಲೀಸ್ ಠಾಣೆ ಇನ್ವೆಸ್ಟಿಗೇಷನ್ ಆಫೀಸರ್, ರಿಜಿಸ್ಟರ್ ಮಾಡಿರುವಂತಹ ಸಂಘಗಳಿಗೆ ಮತ್ತು ಇನ್ನುಳಿದ ಸಾರ್ವಜನಿಕರಿಗೆ ನಿಯಮಿತ ಸೌಂಡ್ ಬಳಸಲು ಸೂಚನೆ ನೀಡಿ ಅನುಮತಿ ಕೊಡುತ್ತಿದ್ದರು. 

ಈ ಆಚರಣೆಯಲ್ಲಿ ಭಾಗವಹಿಸುವಂತಹ ಜನರ ಸುರಕ್ಷತೆ ಮತ್ತು ಶಾಲಾ ಮಕ್ಕಳು,  ರೋಗಿಗಳಿಗೆ  ಅನುಕೂಲ ಮಾಡುವ ಉದ್ದೇಶದಿಂದ ಸರ್ಕಾರವು ಈ ರೀತಿ ಕ್ರಮ ಕೈಗೊಂಡಿರುತ್ತದೆ.

Leave a Comment

WhatsApp Join Group!