ರಾಷ್ಟ್ರದ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಆಗಸ್ಟ್ 15ರಿಂದ 3000 ಸಾವಿರ ರೂಗಳ ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ( annual fastag pass ) ಅನ್ನು ಜಾರಿಗೊಳಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

ವಾರ್ಷಿಕ ಫಾಸ್ಟ್ ಟ್ಯಾಗ್ ನ ಹೇಗೆ ತಗೊಳೋದು? ಉಪಯೋಗ ಏನು?
ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರವು ರಾಷ್ಟ್ರದ ಎಲ್ಲಾ ವಾಹನ ಮಾಲೀಕರಿಗೆ ಮತ್ತು ಚಾಲಕರಿಗೆ ಟೋಲ್ ಗೇಟ್ ನಲ್ಲಿ ಶುಲ್ಕವನ್ನು ಬರಿಸಲು, fastag ಅಳವಡಿಸಿತ್ತು.
Pouti khate : ರೈತರಿಗೆ ಗುಡ್ ನ್ಯೂಸ್: ಅರ್ಜಿ ಹಾಕದೆ ಇದ್ರೂ ಸರ್ಕಾರದಿಂದಲೇ ಪೌತಿ ಖಾತೆ ಮಾಡಲು ನಿರ್ಧಾರ,
ಒಂದು ವರ್ಷಕ್ಕೆ 3000 ರೂ.
ಈ 2025ನೇ ಆಗಸ್ಟ್ 15 ರಿಂದ ಹೊಸದಾಗಿ ವಾರ್ಷಿಕ ಫಾಸ್ಟ್ ಟ್ಯಾಗ್ ಯೋಜನೆಯನ್ನು ಜಾರಿಗೆ ತಂದಿದ್ದು ಇದರಿಂದ ವಾಹನ ಮಾಲಕರು ಮತ್ತು ಚಾಲಕರು ಒಂದು ವರ್ಷಕ್ಕೆ 3000 ರೂ ನೀಡಿ ಪಾಸ್ ಖರೀದಿ ಮಾಡಬೇಕಾಗುತ್ತದೆ.
ಶುಕ್ರವಾರ ಮಧ್ಯಾಹ್ನದಿಂದ ಒಂದೇ ದಿನಕ್ಕೆ ಒಂದು ಪಾಯಿಂಟ್ ಎರಡು ಲಕ್ಷ ಜನರು ಪಾಸ್ ಖರೀದಿ ಮಾಡಿದ್ದಾರೆ.
ಪಾಸ್ ಹೇಗೆ ಸಕ್ರಿಯ ಮಾಡಿಕೊಳ್ಳೋದು?
- ರಾಜಮಾರ್ಗ app ಅಥವಾ NHAI WEBSITE ನಲ್ಲಿ ಈ ಪಾಸ್ ಅನ್ನು ಖರೀದಿ ಮಾಡಬಹುದಾಗಿದೆ.
- ತಮ್ಮ ವಾಹನದ ಸಂಖ್ಯೆ ಮತ್ತು ಈಗ ಪ್ರಸ್ತುತದಲ್ಲಿ ಇರುವಂತಹ ಫಾಸ್ಟ್ ಟ್ರ್ಯಾಕ್ ಐಡಿ ನಮೂದು ಮಾಡಿ ಲಾಗಿನ್ ಮಾಡಬೇಕಾಗುತ್ತದೆ.
- ನಂತರ ವಾಹನ ನೊಂದಣಿ ಸಂಖ್ಯೆ ( VEHICLE REGISTRATION NUMBER ) ಕೆವೈಸಿ ಪೂರ್ಣಗೊಂಡಿರಬೇಕಾಗಿರುತ್ತದೆ.
- ಯುಪಿಐ ಅಥವಾ ಕ್ರೆಡಿಟ್ ಕಾರ್ಡ್ ಮುಖಾಂತರ ಇಲ್ಲವೇ ನೆಟ್ ಬ್ಯಾಂಕಿಂಗ್ ಮೂಲಕ ನಿಗದಿಪಡಿಸಿದ ಹಣವನ್ನು ಪಾವತಿ ಮಾಡಬೇಕು.
- ಅದಾದ ನಂತರದಲ್ಲಿ ಈಗ ಅಸ್ತಿತ್ವದಲ್ಲಿ ಇರುವಂತಹ FASTAG ಗೆ ಹೊಸ ಪಾಸ್ ಲಿಂಕ್ ಆಗುತ್ತದೆ
- ನಂತರ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮುಖಾಂತರ ದೃಢೀಕರಣ ಬರುತ್ತದೆ.
ಯಾವೆಲ್ಲ ವಾಹನಗಳು ಅರ್ಹ?
ಈಗ ಹೊಸದಾಗಿ ಮಾಡಿದಂತಹ ಪಾಸ್ ಕೇವಲ ಖಾಸಗಿ ಮತ್ತು ವಾಣಿಜ್ಯ ತರ ವಾಹನಗಳಿಗೆ ಸೌಲಭ್ಯವಿರುತ್ತದೆ. CHASIS ಸಂಖ್ಯೆಗೆ ಲಿಂಕ್ ಆಗಿರುವಂತಹ ಪಾಸ್ಟಾಗ್ ಗಳು ಅರ್ಹವಿರುವುದಿಲ್ಲ. ಅಲ್ಲದೆ ತಮ್ಮ ಪಾಸ್ಟ್ ಟ್ಯಾಗ್ ನಲ್ಲಿ ಕಪ್ಪು ಪಟ್ಟಿ ಇರಬಾರದು.
ಇಂದಿನಿಂದ phonePe , google pay , ಬಳಸಲು ಹೊಸ ರೂಲ್ಸ್. ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಹೇಗೆ ಕೆಲಸ ಮಾಡುತ್ತೆ ಈ ಹೊಸ FASTAG ,
ತಾವು ಪಾಸ್ ಖರೀದಿ ಮಾಡಿದ ದಿನಾಂಕದಿಂದ ಒಂದು ವರ್ಷದ ತನಕ ಒಟ್ಟಾರೆ 2001 ಕ್ರಾಸಿಂಗ್ ಗಳನ್ನು ಕ್ರಾಸ್ ಮಾಡಬಹುದು. ಒಂದು ವೇಳೆ ನೀವು ಒಂದು ಟೋಲ್ ದಾಟಿದರೆ ಅದು ಒಂದು ಟ್ರಿಪ್ ಎಂದು ಲೆಕ್ಕ ಪರಿಗಣಿಸಲಾಗುತ್ತದೆ.
ಈ ರೀತಿಯಾಗಿ ಒಟ್ಟಾರೆ ಒಂದು ವರ್ಷದ ಒಳಗೆ ಅಥವಾ ಎರಡು ನೂರು ಟ್ರಿಪ್ ಮುಗಿದರೆ, ವರ್ಷದ ಕೊನೆ ಬರದಿದ್ದರೂ ಮತ್ತೆ ನೀವು 3000RS ಪಾವತಿ ಮಾಡಿ ರಿಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ.
ಏನು ಪ್ರಯೋಜನ?
ನ್ಯಾಷನಲ್ ಹೈವೇಗಳಲ್ಲಿ ಹೆಚ್ಚು ಸಂಚಾರ ಮಾಡುವವರಿಗೆ ಈ ಪಾಸ್ ನಿಂದ ಪ್ರತಿವರ್ಷಕ್ಕೆ ಸುಮಾರು 5000 ದಿಂದ ರೂ.7000 ವರೆಗೆ ಉಳಿತಾಯವಾಗಲಿದೆ. ಅಲ್ಲದೆ ಟೋಲ್ ನಲ್ಲಿ ಕಾಯುವಂತ ಸಮಯ ಉಳಿತಾಯವಾಗುತ್ತದೆ ಪದೇ ಪದೇ ಪಾಸಿಗೆ ರಿಚಾರ್ಜ್ ಮಾಡುವಂತಹ ತೊಂದರೆ ತಪ್ಪುತ್ತದೆ.
ಅಧಿಕೃತ ಜಾಲತಾಣ: nhai.gov.in

ನಾನು ಮಾಲತೇಶ bsc ಪದವಿಧರ, ನಾನು 3 ವರ್ಷಗಳಿಂದ ಕೃಷಿ, ಗ್ರಾಮೀಣ ಸಮಾಜದ ಸುದ್ದಿಗಳು, ಸರ್ಕಾರದ ಯೋಜನೆಗಳ ಬಗ್ಗೆ ನಿಖರ ಮತ್ತು ಸರಳ ಮಾಹಿತಿಯನ್ನು ಜನರಿಗೆ ನೀಡುವಲ್ಲಿ ಪರಿಣಿತಿ ಹೊಂದಿರುತ್ತೇನೆ.