Pm kisan 20th installment ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ಜಮಾ ಆಗುವ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯಪಡಿಸುತ್ತೇವೆ. ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಂಡ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು 2019 ರಲ್ಲಿ ಜಾರಿಗೆಗೊಂಡಿತು.
ಈಗಾಗಲೇ ದೇಶಾದ್ಯಂತ 19 ಕಂತುಗಳು ಸುಗಮವಾಗಿ ಮತ್ತು ಯಾವುದೇ ಅಡೆಚಣೆ ಇಲ್ಲದೆ ಎಲ್ಲಾ ಅರ್ಹ ರೈತರ ಖಾತೆಗಳಿಗೆ ನೇರವಾಗಿ Dbt ಮುಖಾಂತರವಾಗಿ ಖಾತೆಗೆ ಜಮಾ ಆಗಿರುತ್ತದೆ.

Pm kisan 20th installment date
ಇದನ್ನೂ ಓದಿ: 1449 ಕೋಟಿ ರೂಪಾಯಿ ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ, ಚೆಕ್ ಮಾಡಿ.
ಈ ಯೋಜನೆಯ ಮೂಲ ಉದ್ದೇಶವೆಂದರೆ ದೇಶಾದ್ಯಂತ ಶೇಕಡ 70% ರಷ್ಟು ಜನರು ಕೃಷಿಯನ್ನು ಅವಲಂಬಿತರಾಗಿದ್ದಾರೆ. ಆದ್ದರಿಂದ ಕೃಷಿ ಚಟುವಟಿಕೆಗಳಿಗೆ ಬೇಕಾಗುವಂತಹ ಸಾಮಗ್ರಿಗಳು, ರಸಗೊಬ್ಬರ ಬೀಜಗಳು ಮತ್ತು ಇನ್ನಿತರ ಉಪಕರಣಗಳನ್ನು ಬಿತ್ತನೆಗೆ ಪಡೆಯುವ ಸಲುವಾಗಿ ಆರ್ಥಿಕವಾಗಿ ನೆರವು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ.
Latest News: ಕರ್ನಾಟಕ ಹವಾಮಾನ ವರದಿ ಮತ್ತು ಮಳೆ ಮಾಹಿತಿ ಇಲ್ಲಿದೆ.
ಈಗಾಗಲೇ 19 ಕಂತುಗಳು ಜಮಾ ಆಗಿದ್ದು, ಸದ್ಯ ಇಪ್ಪತ್ತನೇ ಕಂತು ಖಾತೆಗೆ ಜಮ್ಮ ಆಗುವುದು ಬಾಕಿ ಇರುತ್ತದೆ. ( Pmkisan 20th installment date ) ಎಂ ಕಿಸಾನ್ 20ನೇ ಕಂತಿನ ಹಣ ಜಮಾ ಆಗುವ ದಿನಾಂಕ ಈಗ ಅಧಿಕೃತವಾಗಿ ಪ್ರಕಟಗೊಂಡಿದ್ದು, pmkisan samman nidhi x ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.
ಪ್ರತಿವರ್ಷವೂ ಮೂರು ಕಂತುಗಳಂತೆ ಒಟ್ಟು 6,000 ರೂಗಳನ್ನು ಅರ್ಹ ಫಲಾನುಭವಿ ರೈತನ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇದೇ ಆಗಸ್ಟ್ ತಿಂಗಳ ಎರಡನೆಯ ( august 2 ) ತಾರೀಕು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಏರ್ಪಡಿಸಿರುವಂತಹ ಕಾರ್ಯಕ್ರಮದಲ್ಲಿ, ದೇಶಾದ್ಯಂತ ಎಲ್ಲಾ ಫಲಾನುಭವಿ ರೈತರ ಖಾತೆಗಳಿಗೆ ನೀರು ನಗದು ವರ್ಗಾವಣೆ ಮುಖಾಂತರವಾಗಿ ಹಣವನ್ನು ಜಮಾ ಮಾಡಲು ಅಧಿಕೃತವಾಗಿ ಚಾಲನೆಯನ್ನು ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
Pm kisan website link: https://pmkisan.gov.in/beneficiarystatus_new.aspx
ಇದನ್ನೂ ಓದಿ: ಭಾರೀ ಮಳೆ ಮುನ್ಸೂಚನೆ ಹವಾಮಾನ ಇಲಾಖೆ ವರದಿ, ಇಲ್ಲಿದೆ ಮಾಹಿತಿ.