ರಾಜ್ಯದಲ್ಲಿ ಮತ್ತೆ ಮಳೆ Male mahiti ಮುಂದುವರಿದಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಧಾರಾಕಾರ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ರಾಜ್ಯದಲ್ಲಿ ಒಂದು ವಾರ ಭಾರೀ ಮಳೆ ಮುನ್ಸೂಚನೆ
ನಮ್ಮ ರಾಜ್ಯದಲ್ಲಿ ಅಗಸ್ಟ್ 13ರವರೆಗೆ ಭಾರಿ ಮಳೆ ಸುರಿಯಲಿದೆ ಎಂದು ತಿಳಿಸಿದ್ದು ಹಲವು ಜಿಲ್ಲೆಗಳಿಗೆ yellow alert ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 2 ತಿಂಗಳು ಈ ಜಿಲ್ಲೆಗಳಿಗೆ ಮಳೆ ಕೊರತೆ, imd ಸೂಚನೆ.
ಕರಾವಳಿ ಭಾಗದ ಮೀನುಗಾರರಿಗೆ ಸೂಚನೆ.
ಕರಾವಳಿ ಭಾಗದಲ್ಲಿ ಪ್ರತಿ ಗಂಟೆಗೆ ಸುಮಾರು 40 ರಿಂದ 60 ಕಿಲೋಮೀಟರ್ ವೇಗದಲ್ಲಿ, ಬೀಸುತ್ತಿರುವ ಗಾಳಿಯಿಂದ ಮಿಂಚು ಗುಡುಗು ಸಹಿತ ಧಾರಾಕಾರ ಮಳೆ ಸುರಿಯಲಿದೆ ಎಂದು ಮುನ್ಸೂಚನೆಯನ್ನು ನೀಡಿ ಕರಾವಳಿ ಭಾಗದ ಮೀನುಗಾರರಿಗೆ ಕಡಲ ತೀರಕ್ಕೆ ಅಥವಾ ಕಡಲೆಗೆ ಇಳಿಯದಂತೆ ಮುನ್ನೇಚ್ಚರಿಕೆ ನೀಡಲಾಗಿದೆ.
ಈ ಜಿಲ್ಲೆಗಳಿಗೆ ಭಾರಿ ಮಳೆ.
ಉತ್ತರ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ದಕ್ಷಿಣ ಕನ್ನಡ ಉತ್ತರ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆ ಬರುತ್ತಲಿದೆ.
ಬೆಂಗಳೂರು ಕಡೆ ಭಾರೀ ಮಳೆ.
ಹಾಗೆಯೇ ಬೆಂಗಳೂರು ಗ್ರಾಮಾಂತರ ಬೆಂಗಳೂರು ನಗರ ಪ್ರದೇಶದಲ್ಲಿ ಸಹ ಮಳೆ ಆರ್ಭಟ ಜಾಸ್ತಿ ಇದೆ. ಬೀದರ್ ಕಲ್ಬುರ್ಗಿ ಕೊಪ್ಪಳ ಬೆಳಗಾವಿ ರಾಯಚೂರು ಯಾದಗಿರಿ ವಿಜಯಪುರ ಬಳ್ಳಾರಿ ಚಿಕ್ಕಮಗಳೂರು ಚಿತ್ರದುರ್ಗ ದಾವಣಗೆರೆ ಕೊಡಗು ಕೋಲಾರ ಶಿವಮೊಗ್ಗ ತುಮಕೂರು ಹಾಗೂ ಯಾದಗಿರಿ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ವರದಿ ನೀಡಿದೆ.
ಚಂಡ ಮಾರುತ ಪ್ರಭಾವ.
ಉತ್ತರ ಕರಾವಳಿ ಮತ್ತು ತೆಲಂಗಾಣ ರಾಜ್ಯದ ಸಮುದ್ರ ತೀರದಲ್ಲಿ 3.1 ಮತ್ತು 5.8 ಕಿಲೋಮೀಟರ್ ನಡುವಿನ ಭಾಗದಲ್ಲಿ ಚಂಡ ಮಾರುತ ಪರಿಚಲನೆ ಏರ್ಪಟ್ಟಿದೆ.
ಆಗಸ್ಟ್ 13 ವರೆಗೆ ಮಳೆ.
ಈ ಕಾರಣದಿಂದಾಗಿ ಆಗಸ್ಟ್ 13 ರವರಿಗೆ ವಾಯುವ್ಯ ಮತ್ತು ಪಶ್ಚಿಮ ಮಧ್ಯ ಬಂಗಾಳಕೊಲ್ಲಿಯೇ ಕಡಿಮೆ ಒತ್ತಡ ಪ್ರದೇಶ ರೂಪ ಗೊಳ್ಳುವ ಸಾಧ್ಯತೆ ಇರಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಈ ಕಾರಣದಿಂದ ರಾಜ್ಯಾದ್ಯಂತ ಭಾರಿ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ನಾನು ಮಾಲತೇಶ bsc ಪದವಿಧರ, ನಾನು 3 ವರ್ಷಗಳಿಂದ ಕೃಷಿ, ಗ್ರಾಮೀಣ ಸಮಾಜದ ಸುದ್ದಿಗಳು, ಸರ್ಕಾರದ ಯೋಜನೆಗಳ ಬಗ್ಗೆ ನಿಖರ ಮತ್ತು ಸರಳ ಮಾಹಿತಿಯನ್ನು ಜನರಿಗೆ ನೀಡುವಲ್ಲಿ ಪರಿಣಿತಿ ಹೊಂದಿರುತ್ತೇನೆ.