Pouti khate : ರೈತರಿಗೆ ಗುಡ್ ನ್ಯೂಸ್: ಅರ್ಜಿ ಹಾಕದೆ ಇದ್ರೂ ಸರ್ಕಾರದಿಂದಲೇ ಪೌತಿ ಖಾತೆ ಮಾಡಲು ನಿರ್ಧಾರ,

Share This Post

ಕೃಷಿಕರೇ ಅಥವಾ ರೈತ ಮಿತ್ರರೇ ನಿಮಗಿದು ಗೊತ್ತಾ? ನಮ್ಮ ರಾಜ್ಯದಲ್ಲಿ ಸರಿಸುಮಾರು 52 ಲಕ್ಷ ಹೊಲಗಳು ಅಥವಾ ಜಮೀನುಗಳು ಸತ್ತಂತವರ ರೈತರ ಹೆಸರಿನಲ್ಲಿಯೇ ನೋಂದಾಯಿತ ಆಗಿವೆ. ಈಗ ಸರ್ಕಾರವೇ ಪೌತಿ ಖಾತೆ ( pouti khate ) ಮಾಡಲು ನಿರ್ಧರಿಸಿದೆ.

ಆದರೆ ಈಗಿರುವಂತಹ ವಾರಸುದಾರ ಅರ್ಜಿ ಸಲ್ಲಿಸಿ ಪೌತಿ ಖಾತೆಯನ್ನು ಮಾಡಿಸಿಕೊಳ್ಳಬೇಕು. ಆದರೆ ವಿವಾದಿತ ಸಮಸ್ಯೆಗಳಿಂದ ಈ ಖಾತೆಗಳು ಮಾಡಿಸದೆ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದು ಹಾಗೆಯೇ ಉಳಿದುಕೊಂಡಿರುತ್ತದೆ.

Karnataka farmers pouti khate transfer by government
Farmers pouti khate transfer

ಇದನ್ನೂ ಓದಿ: Pm kisan 20th installment : ಪಿಎಂ ಕಿಸಾನ್ 20ನೆ ಕಂತಿನ ಹಣ ಜಮಾ ದಿನಾಂಕ ಪ್ರಕಟ.

ಸರ್ಕಾರದಿಂದಲೇ ಪೌತಿ ಖಾತೆ ಮಾಡಲು ನಿರ್ಧಾರ,

ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಈಗಿರುವ ವಾರಸುದಾರ ಅರ್ಜಿ ಸಲ್ಲಿಸದೆ ಇದ್ದರೂ ಸಹ ಸ್ವಯಂಪ್ರವರಿತವಾಗಿ ಅವುಗಳನ್ನು ಹೆಸರು ಬದಲಾವಣೆ ಮಾಡಲು ನಿರ್ಧಾರ ಮಾಡಿದೆ.  

ಸಚಿವ ಕೃಷ್ಣ ಭೈರೇಗೌಡ ಅವರು ಮಾತನಾಡಿ ಮೃತರ ಹೆಸರಿನಲ್ಲಿ ಜಮೀನುಗಳ ಹೆಸರುಗಳು ಇದ್ದಲ್ಲಿ ಅವರ ಮಕ್ಕಳಿಗೆ ಅಥವಾ ವಂಶಸ್ಥರಿಗೆ ಸರ್ಕಾರದಿಂದ ದೊರೆಯುವ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ .

Bele sameekshe app : 2025-26ರ ಮುಂಗಾರು ಬೆಳೆ ಸಮೀಕ್ಷೆ ಮಾಡಲು App ಬಿಡುಗಡೆ, ಇಲ್ಲಿದೆ ಡೈರೆಕ್ಟ್ ಲಿಂಕ್.

ಆದಕಾರಣದಿಂದಾಗಿ ನಾವು ತೊಂದರೆ ಮತ್ತು ಗೊಂದಲಗಳಿಲ್ಲದ ಜಮೀನುಗಳನ್ನು ಸ್ವಯಂ ಪ್ರೇರಿತವಾಗಿ ವಂಶಸ್ಥರಿಗೆ ವರ್ಗಾವಣೆ ಮಾಡಲು ಅಧಿಕಾರಿಗಳನ್ನು ನೇಮಿಸಿದ್ದೇವೆ ಎಂದು ತಿಳಿಸಿದ್ದಾರೆ.

ಈ ಪ್ರಕ್ರಿಯೆಯನ್ನು ತಾಲೂಕ ಮಟ್ಟದ ಗ್ರಾಮ ಲೆಕ್ಕಾಧಿಕಾರಿ ಅವರಿಗೆ ವಹಿಸಿ , ಪೌತಿ ಖಾತೆ ಮಾಡಿಸಿಕೊಳ್ಳುವಂತಹ ರೈತನಿಗೆ ಅಥವಾ ಕೃಷಿಕನಿಗೆ ಸಲಹೆಗಳನ್ನು ಕೊಟ್ಟು ವರ್ಗಾವಣೆ ಮಾಡಲು ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ bhoomi online ಅಧಿಕೃತ ಜಾಲತಾಣ ಭೇಟಿ ಮಾಡಿ, click here

Leave a Comment

WhatsApp Join Group!