ನಾಡಿನ ಸಮಸ್ತ ರೈತ ಬಾಂಧವರೇ ನಿಮಗೆಲ್ಲ ನನ್ನ ಈ ಜಾಲತಾಣಕ್ಕೆ ಸ್ವಾಗತ. ಕರ್ನಾಟಕ ರಾಜ್ಯದ್ಯಂತ ಕೃಷಿಕರು ಅಥವಾ ರೈತರು ಈ ವರ್ಷದ ಮುಂಗಾರು ಹಂಗಾಮಿನ ಬಿತ್ತನೆ ಈಗಾಗಲೇ ಪೂರ್ಣಗೊಳಿಸಿ, ತಮ್ಮ ಜಮೀನುಗಳ ಬೆಳೆಗಳಿಗೆ ಔಷಧೋಪಚಾರ ಮಾಡಿರುತ್ತಾರೆ. Bele sameekshe app
ಕೃಷಿ ಇಲಾಖೆಯು ( agriculture department ) ಜಮೀನಿನಲ್ಲಿ ಬೆಳೆದಿರುವಂತಹ ಬೆಳೆ ಮಾಹಿತಿಯನ್ನು, ರೈತ ಮೊಬೈಲ್ ಸಹಾಯದಿಂದ ನಿಖರವಾದ ಬೆಳೆ ಮಾಹಿತಿಯನ್ನು ದಾಖಲು ಮಾಡಲು ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು google play store ನಲ್ಲಿ ಬಿಡುಗಡೆ ಮಾಡಿದೆ.

Bele sameekshe app download
ಇದನ್ನೂ ಓದಿ: Bele vime amount : ರೈತರ ಖಾತೆಗೆ 1449 ಕೋಟಿ ಬೆಳೆ ವಿಮೆ ಜಮಾ. ನಿಮ್ಮ ಖಾತೆಗೆ ಬಂತಾ check ಮಾಡಿ.
ಈಗಾಗಲೇ ಕಳೆದ ಎರಡು ಮೂರು ವರ್ಷಗಳಿಂದ ಸರ್ಕಾರವು ರಾಜ್ಯದ ತನ್ನ ರೈತರಿಗೆ ತಾವೇ ಖುದ್ದಾಗಿ ಪೈರುಗಳ ವಿವರಗಳನ್ನು ನಮೂದಿಸಲು ” ಮುಂಗಾರು ಬೆಳೆ ಸಮೀಕ್ಷೆ ” ಅನ್ನುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿ, ಅದನ್ನು google ಸ್ವಾಮ್ಯದ app store ನಲ್ಲಿ, ರೈತನೇ ಡೌನ್ಲೋಡ್ ಮಾಡಿಕೊಂಡು ಬಳಸಲು ಅವಕಾಶ ಮಾಡಿಕೊಟ್ಟಿದೆ.
ಇದರ ವಿಶೇಷತೆಯು ಏನೆಂದರೆ, ಇದರಲ್ಲಿ ಜಿಪಿಎಸ್ ( global positioning system ) ಅಳವಡಿಕೆ ಮಾಡಲಾಗಿದ್ದು ರೈತನ ತನ್ನ ಜಮೀನಿನ ಸರ್ವೆ ನಂಬರಿನಲ್ಲಿ ನಿಂತುಕೊಂಡೇ ಸಮೀಕ್ಷೆ ಮಾಡಬೇಕಾಗುತ್ತದೆ. ಇದರಿಂದ ಆಯಾ ಜಮೀನಿನ ನಿಖರವಾದ ಮತ್ತು ನಿರ್ದಿಷ್ಟವಾದಂತಹ ಬೆಳೆಗಳ ಮಾಹಿತಿಯನ್ನು ಅದರಲ್ಲಿ ದಾಖಲು ಮಾಡಲು ಸಹಾಯಕವಾಗುತ್ತದೆ.
Ration card amendment : ಪಡಿತರ ಚೀಟಿ ತಿದ್ದುಪಡಿ ಮಾಡಲು ಆಗಸ್ಟ್ 31 ವರೆಗೆ ಅವಕಾಶ,
ನೀವು ಗೂಗಲ್ ಪ್ಲೇ ಸ್ಟೋರ್ ನಿಂದ ಆಪನ್ನು ಡೌನ್ಲೋಡ್ ಮಾಡಿಕೊಂಡ ನಂತರದಲ್ಲಿ , ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಅದಕ್ಕೆ ಬರುವಂತಹ ಓಟಿಪಿ ನಂಬರನ್ನು ನಮೂದಿ ಮಾಡಿ, ನಿಮ್ಮ ಎಲ್ಲಾ ಮಾಹಿತಿಗಳನ್ನು ನೀಡಿದರೆ ಅಪ್ಲಿಕೇಶನ್ ಲಾಗಿನ್ ದೊರೆಯುತ್ತದೆ.

ಆಮೇಲೆ ನಿಮ್ಮ ಜಮೀನಿನ ಸರ್ವೆ ನಂಬರನ್ನು ನಮೂದಿಸಿಕೊಂಡು, ಮುಂಗಾರು ಅಥವಾ ಹಿಂಗಾರು ಎನ್ನುವುದನ್ನು ಸೆಲೆಕ್ಟ್ ಮಾಡಿ ಬೆಳೆಯ ಚಿತ್ರಣ ಮತ್ತು ಇನ್ನಿತರ ಮಾಹಿತಿ ದಾಖಲು ಮಾಡಬೇಕು.

ಬೆಳೆ ಸಮೀಕ್ಷೆ ಮಾಡೋದ್ರಿಂದ ಏನು ಪ್ರಯೋಜನ?
ವಾರ್ಷಿಕ ಬೆಳೆ ನಷ್ಟ ಆದಲ್ಲಿ ಬೆಳೆಯುವ ಪರಿಹಾರವನ್ನು ಪಡೆದುಕೊಳ್ಳಲು ಇದು ತುಂಬಾ ಸಹಕಾರಿಯಾಗುತ್ತದೆ. ನೈಸರ್ಗಿಕ ಮತ್ತು ಪ್ರಕೃತಿ ವಿಕೋಪಗಳಿಂದ ( natural disaster ) ಹಾನಿಗೆ ಒಳಗಾದ ಬೆಳೆಗಳಿಗೆ, ಸರ್ಕಾರಗಳಿಂದ ತಾಲ್ಲೂಕುಗಳ ಅನ್ವಯ ಬೆಳೆ ಪರಿಹಾರವನ್ನು ಪಡೆಯಲು ಇದು ಉತ್ತಮ ಕಾರ್ಯ ನಿರ್ವಹಿಸುತ್ತದೆ.
ಮತ್ತು ನಿಮ್ಮ ಪಹಣಿ ಪತ್ರದಲ್ಲಿ ವಾರ್ಷಿಕವಾಗಿ ಯಾವ ಋತುವಿನಲ್ಲಿ ಯಾವ ಬೆಳೆ ಬೆಳೆಯಲಾಗಿದೆ ಎಂದು ನಮೂದಿಸಲು ಈ ಅಂಕಿ ಅಂಶವನ್ನು ಬಳಕೆ ಮಾಡಲಾಗುತ್ತದೆ. ಬೆಳೆ ಸಮೀಕ್ಷೆ app ಡೌನ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿರಿ.
Mungaru bele sameekshe app: download here
ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ , ಇಲ್ಲಿದೆ ಮಾಹಿತಿ. Free sewing machine scheme